ಕೋಂಡಾಣಾ ಗುಹೆಗಳು ಕೋಂಡಾಣಾ ಎಂಬ ಸಣ್ಣ ಹಳ್ಳಿಯಲ್ಲಿ ಸ್ಥಿತವಾಗಿವೆ. ಕಾರ್ಲಾ ಗುಹೆಗಳ ವಾಯವ್ಯಕ್ಕೆ ೧೬ ಕಿಮೀ ದೂರದಲ್ಲಿವೆ. ಈ ಗುಹಾ ಗುಂಪು ೧೬ ಬೌದ್ಧ ಗುಹೆಗಳನ್ನು ಹೊಂದಿದೆ. ಕ್ರಿ.ಪೂ. ಮೊದಲನೇ ಶತಮಾನದಲ್ಲಿ ಗುಹೆಗಳನ್ನು ಉತ್ಖನನ ಮಾಡಲಾಯಿತು. ಮರದ ಮಾದರಿಯ ಮೇಲಿನ ನಿರ್ಮಾಣವು ಗಮನಾರ್ಹವಾಗಿದೆ. ರಾಜ್‍ಮಾಚಿ ಗ್ರಾಮದಿಂದ ಇಳಿಯುವ ಮೂಲಕ ಗುಹೆಯನ್ನು ತಲುಪಬಹುದು. == ವಿವರಣೆ == ಕೋಂಡಾಣೆಯಲ್ಲಿನ ವಿಹಾರ ಖಂಡಿತವಾಗಿಯೂ ಹೆಚ್ಚು ಆಧುನಿಕವಾಗಿ ಕಾಣುತ್ತದೆ. ಚೈತ್ಯವು ಎಷ್ಟು ಹಾಳಾಗಿದೆಯೆಂದರೆ ಇದು ಅಥವಾ ಭಾಜಾ ಗುಹೆಗಳ ವಿಹಾರದಲ್ಲಿ ಮೊದಲು ಯಾವುದು ಪೂರ್ಣಗೊಂಡಿರಬಹುದೆಂದು ನಿರ್ಧರಿಸುವುದು ಈಗ ಅಸಾಧ್ಯ. === ಗುಹೆ ಸಂಖ್ಯೆ 1: ಚೈತ್ಯ === ಇವು ವಾಯವ್ಯಕ್ಕೆ ಮುಖ ಮಾಡಿವೆ, ಮತ್ತು ನೈಋತ್ಯ ದಿಕ್ಕಿನ ಮೊದಲನೆಯದು ಚೈತ್ಯ-ಗುಹೆಯಾಗಿದೆ. ಇದನ್ನು ಆವರಿಸಿದ್ದ ಕಿರುಪಟ್ಟಿಗಳು ನಾಶವಾಗಿವೆ, ಹಾಗೆಯೇ ಸ್ತೂಪದ ಕೆಳಭಾಗದ ಸಂಪೂರ್ಣ ಭಾಗವೂ ಸಹ ನಾಶವಾಗಿದೆ. === ಗುಹೆ ಸಂಖ್ಯೆ 2: ವಿಹಾರ === ಸ್ವಲ್ಪ ಈಶಾನ್ಯಕ್ಕೆ ಸಂಖ್ಯೆ , ಒಂದು ವಿಹಾರವಿದೆ. ಇದರ ಜಗುಲಿಯ ಮುಂಭಾಗವು ಎಡ ತುದಿಯನ್ನು ಹೊರತುಪಡಿಸಿ ಸಂಪೂರ್ಣವಾಗಿ ನಾಶವಾಗಿದೆ. === ಗುಹೆ ಸಂಖ್ಯೆ 3 === ಗುಹೆ ಸಂ. 3 ವಿಶೇಷವಾಗಿ ಮುಂಭಾಗದಲ್ಲಿ ಹೆಚ್ಚು ಹಾಳಾಗಿರುವ ಒಂಬತ್ತು ಕೋಶಗಳನ್ನು ಹೊಂದಿರುವ ಸರಳ ವಿಹಾರವಾಗಿದ್ದು ಬಹುಶಃ ಮೂರು ಬಾಗಿಲುಗಳನ್ನು ಹೊಂದಿತ್ತು. === ಗುಹೆ ಸಂಖ್ಯೆ 4 === ಸಂಖ್ಯೆ .4 ಹಿಂಭಾಗದಲ್ಲಿ ಒಂಬತ್ತು ಕೋಶಗಳ ಸಾಲನ್ನು ಹೊಂದಿದೆ. == ಉಲ್ಲೇಖಗಳು ==